ಈ ನಡುವೆ ಕವಿತೆ ಹುಟ್ಟುತ್ತಿಲ್ಲ,
ಏಕೆಂದರೆ ಬದುಕು ಕಾದಂಬರಿ ಆಗುತ್ತಿದೆ !!
ಭಾವಜೀವಿ
ನನಗೇಕೋ ಕಥಾಸಾಗರಿಗಿಂತ, ಕಾದಂಬರಿಗಿಂತ ,ಕಾವ್ಯ ಕನ್ನಿಕೆಯೇ ಇಷ್ಟ !!
ನನ್ನ ಬಗ್ಗೆ ಒಂಚೂರು ! ಮತ್ತು ನನ್ನ ಮನೋ ಡೇಟಾ !!
- ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್
- ಭಾವ ಜೀವಿ, ಕಾವ್ಯ ಜೀವಿ, ಪುಸ್ತಕ ಪ್ರೇಮಿ, ಘಜಲ್ ಪ್ರಿಯ, ಭಾವಗೀತೆ ಕೇಳುವ ಭಾವುಕ, ಕವಿ, ಗಾಯಕ, ಮಗು, ನೆನಪಿನ ಗಣಿ, ಬಹುಮುಖ ಪ್ರತಿಭೆ ಅಂತ ಗೆಳೆಯ ಗೆಳತಿಯರು ಅಂತಾರೆ , ನಾನು ಬಯಲು ಸೀಮೆಯ ಹುಡುಗ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ತುರ್ವಿಹಾಳ್ ಎಂಬ ನೀರಾವರಿ ಗ್ರಾಮ ದವನು. ಬಾಲ್ಯ ಅಲ್ಲಿ, ಬದುಕು ಬೆಂಗಳೂರಿನಲ್ಲಿ !!, ಅಂದ ಹಾಗೆ ಬರ್ತೀರಲ್ಲಾ ನಮ್ಮ ಮನೆಗೆ,ಖಂಡಿತ ಬರಬೇಕು ಛಲೋ ನಾಷ್ಟ, ಕಡಕ್ ಛಾ ಅಂಡ್ ಆಫ್ ಕೋರ್ಸ್ ಒಂದು ಒಳ್ಳೇ ಪುಸ್ತಕ , ಇಂಪಾಗಿರೋ ಒಂದು ಗಜಲ್ ಅಥವಾ ಭಾವಗೀತೆ ಸೀಡೀ ಇಷ್ಟು ಕೊಡಬಲ್ಲೆ !! ಬರ್ತೀರಲ್ಲಾ !! ಈ ಪುಟದೊಳಗ ನಾನು ಆವಾಗ ಆವಾಗ ಬರಕೊಂಡಿರೋ ಕವನಗಳನ್ನ ನಿಮ್ಮ ಮುಂದ ಹರ್ವೀನಿ ಓದ್ರಿ, ಏನು ಅನಿಸ್ತು ಅಂತ ಒಂದು ಪತ್ರ ಗೀಚರಿ, ಅದಕಿಂತ ಮಿಗಿಲಾಗಿ ಬರೆವ ಹಕ್ಕಿಗೆ ಬೇಕೇ ಬಿರುದು ಸನ್ಮಾನ !!
ಕವನಗಳ ಗೊಂಚಲು
ಶನಿವಾರ, ನವೆಂಬರ್ 15, 2008
ಗುರುವಾರ, ಸೆಪ್ಟೆಂಬರ್ 20, 2007
ಮೊದಲ ಒಲವಿನ ಚೆಲುವು
ಮೊದಲ ಒಲವಿನ ಚೆಲುವೇ
ಹಾಗೆ.
ನಿಲುಕದ ನಭದ ನಕ್ಷತ್ರದ
ನಗುವಿನಂತೆ.
ಹೊನ್ನಾಗಿ ಹೊಳೆವ ಹಳೆಯ
ಹಾಡಿನಂತೆ.
ಮನದ ಬಾಗಿಲು ದಾಟಿ ಒಳ ಸುಳಿವ
ನೆನಪಿನಂತೆ.
ಹಾಗೆ.
ನಿಲುಕದ ನಭದ ನಕ್ಷತ್ರದ
ನಗುವಿನಂತೆ.
ಹೊನ್ನಾಗಿ ಹೊಳೆವ ಹಳೆಯ
ಹಾಡಿನಂತೆ.
ಮನದ ಬಾಗಿಲು ದಾಟಿ ಒಳ ಸುಳಿವ
ನೆನಪಿನಂತೆ.
ಅವಳಿಲ್ಲ !!
ಅವಳಿರುವಾಗ
ನನ್ನಲ್ಲಿ ಕವಿತೆಗಳ
ಒಡವೆ ಇರಲಿಲ್ಲ.
ಎದೆಯಿಂದ ಕವಿತೆಗಳನೆಲ್ಲ
ಬಸಿದು ತಂದಿರುವೆ.
ಕವಿತೆಗಳ ಒಡವೆ ತೋರಿಸಬೇಕೆಂದರೆ
ಅವಳಿಲ್ಲ !!
ನನ್ನಲ್ಲಿ ಕವಿತೆಗಳ
ಒಡವೆ ಇರಲಿಲ್ಲ.
ಎದೆಯಿಂದ ಕವಿತೆಗಳನೆಲ್ಲ
ಬಸಿದು ತಂದಿರುವೆ.
ಕವಿತೆಗಳ ಒಡವೆ ತೋರಿಸಬೇಕೆಂದರೆ
ಅವಳಿಲ್ಲ !!
ನೆನಪುಗಳ ಸೆಳವು.
ಮನದ ಮೊಂಬತ್ಟಿಯ ಮೇಲೆ
ಮಿಂಚಿನ ಮಿನುಗು.
ಎದೆಯ ಹಾದಿ ಗುಂಟ
ನೆನಪುಗಳ ಸೆಳವು.
ಕಣ್ಣ ಹನಿಗಳಿಗೀಗ
ಬಯಲು ಸೀಮೆಯ ಬರ.
ಕಡಲ ಕಿನಾರೆಗಳ ನಡುವೆ
ಅಲೆಗಳ ಪರದೆ !!
ಮಿಂಚಿನ ಮಿನುಗು.
ಎದೆಯ ಹಾದಿ ಗುಂಟ
ನೆನಪುಗಳ ಸೆಳವು.
ಕಣ್ಣ ಹನಿಗಳಿಗೀಗ
ಬಯಲು ಸೀಮೆಯ ಬರ.
ಕಡಲ ಕಿನಾರೆಗಳ ನಡುವೆ
ಅಲೆಗಳ ಪರದೆ !!
ನೆನಪುಗಳು
ಹನಿಗೂಡಿ ಕಡಲಾಗದೆ
ಮನದ ನೆಲಕೆ ಹಸಿರು ತಂದ ವು.
ಎಲೆ ಮೇಲೆ ಕೂತು ಇಬ್ಬನಿ ಯಾಗದೆ
ಮನದ ಕೊರಳಿಗೆ ಮಾಲೆಯ ಹೊಳಪು ತಂದ ವು.
ರಾತ್ರಿಯೆಲ್ಲ ತಣ್ಣಗೆ ಹೆಪ್ಪು ಗಟ್ಟದೆ
ಮನದ ಹಾಲಿನ ಮೇಲೆ ಕೆನೆ ಗಟ್ಟಿ ನಿಂತ ವು.
ಮಾತು ಗಳಂತೆ ಮರೆತು ಕರಗದೆ
ಮನದ ಎದೆಯ ಮೇಲೆ ಕವಿತೆಯಂತೆ ನಿಂತ ವು.
ಮನದ ನೆಲಕೆ ಹಸಿರು ತಂದ ವು.
ಎಲೆ ಮೇಲೆ ಕೂತು ಇಬ್ಬನಿ ಯಾಗದೆ
ಮನದ ಕೊರಳಿಗೆ ಮಾಲೆಯ ಹೊಳಪು ತಂದ ವು.
ರಾತ್ರಿಯೆಲ್ಲ ತಣ್ಣಗೆ ಹೆಪ್ಪು ಗಟ್ಟದೆ
ಮನದ ಹಾಲಿನ ಮೇಲೆ ಕೆನೆ ಗಟ್ಟಿ ನಿಂತ ವು.
ಮಾತು ಗಳಂತೆ ಮರೆತು ಕರಗದೆ
ಮನದ ಎದೆಯ ಮೇಲೆ ಕವಿತೆಯಂತೆ ನಿಂತ ವು.
ಕವಿತೆ ಎಂಬ ಮನೆ
'ಹೇಗೆ ಬರೆಯುವೆ ಕವನ '?
ಕಣ್ಣರಳಿಸಿ ಕೇಳಿದಳು ನನ್ನ ಹುಡುಗಿ.
'ಗೊತ್ತಿಲ್ಲ ನಲ್ಲೇ
ಅಕ್ಷರಗಳ ಆಟ ಆಡಲು ಕೂಡುವೆ,
ಕವಿತೆ ಎಂಬ ಮನೆ ಸಿದ್ದ'
ಅಂದೆ.
ಕಣ್ಣರಳಿಸಿ ಕೇಳಿದಳು ನನ್ನ ಹುಡುಗಿ.
'ಗೊತ್ತಿಲ್ಲ ನಲ್ಲೇ
ಅಕ್ಷರಗಳ ಆಟ ಆಡಲು ಕೂಡುವೆ,
ಕವಿತೆ ಎಂಬ ಮನೆ ಸಿದ್ದ'
ಅಂದೆ.
ಕನಸುಗಳ ಚೀಲ
ಕನಸುಗಳ ಚೀಲ ಹೊತ್ತು ಹೊರಟಿತ್ತು
ಮನಸು.
ಚೀಲವೇಕೋ ಹಗುರವಾಗಿ,
ಕನಸುಗಳು ಸೋರೀ ಹೋದವೆಂದು
ದಿಗಿಲು ಗೊಂಡಿತು ಮನಸು.
ತಿರುಗಿ ನೋಡಿದರೆ ನನಸುಗಳ
ರಂಗೋಲಿ ಬಿಡಿಸಿತ್ತು
ಬದುಕು.
ಮನಸು.
ಚೀಲವೇಕೋ ಹಗುರವಾಗಿ,
ಕನಸುಗಳು ಸೋರೀ ಹೋದವೆಂದು
ದಿಗಿಲು ಗೊಂಡಿತು ಮನಸು.
ತಿರುಗಿ ನೋಡಿದರೆ ನನಸುಗಳ
ರಂಗೋಲಿ ಬಿಡಿಸಿತ್ತು
ಬದುಕು.
ಎಸ್ ಎಮ್ ಎಸ್ ಕಳಿಸುತ್ತೇನೆ ನಾನು
ಎಸ್ ಎಮ್ ಎಸ್
ಕಳಿಸುತ್ತೇನೆ ನಾನು
ಅವರಿರವರ ತಲೆ ತಿಂದು
ಕಾಲಹರಣ ಮಾಡಬಹುದೆಂಬ
ಭ್ರಮೆಯಿಂದಲ್ಲ ,
ಇರುವಷ್ಟು ಹೊತ್ತು,
ನನ್ನ ನೆನಪು ಅವರಿಗೆ,
ಅವರ ನೆನಪು
ನನಗೆ ಬರುತ್ತಿರಲಿ ಎಂಬ
ಒಂದೇ ಒಂದು ಆಸೆಯಿಂದ !!
--ಜೀ ಎಸ್ ಎಸ್ ಅವರ ಕ್ಷಮೆ ಕೋರಿ !!
ಕಳಿಸುತ್ತೇನೆ ನಾನು
ಅವರಿರವರ ತಲೆ ತಿಂದು
ಕಾಲಹರಣ ಮಾಡಬಹುದೆಂಬ
ಭ್ರಮೆಯಿಂದಲ್ಲ ,
ಇರುವಷ್ಟು ಹೊತ್ತು,
ನನ್ನ ನೆನಪು ಅವರಿಗೆ,
ಅವರ ನೆನಪು
ನನಗೆ ಬರುತ್ತಿರಲಿ ಎಂಬ
ಒಂದೇ ಒಂದು ಆಸೆಯಿಂದ !!
--ಜೀ ಎಸ್ ಎಸ್ ಅವರ ಕ್ಷಮೆ ಕೋರಿ !!
ಬುಧವಾರ, ಸೆಪ್ಟೆಂಬರ್ 19, 2007
ಅವನು
ಅವನು
ಮಾತಿನ ಮೋಡಿಯಲಿ
ಮನವ ಗೆದ್ದು
ಮರುಳು ಮಾಡಿದ ಮಾಂತ್ರಿಕ.
ಅವನು
ಎದೆಯ ವೀಣೆಯ ಮೀಟೀ
ಹಾಡುಗಳ ಹೊನಲಿನ ಮೇಲೆ
ಪಯಣಿಸಲು ಕರೆದ ಗಾಯಕ.
ಅವನು
ಅಕ್ಶರಗಳ ಪೋಣಿಸಿ ,
ಕವಿತೆಗಳ ಕಟ್ಟಿ,
ಬದುಕನ್ನು
ದೃಶ್ಯ ಕಾವ್ಯ ವಾಗಿಸಿದ ಕವಿ.
ಅವನು
ಬದುಕಿನ ಬಿಂಬಗಳನೆಲ್ಲ
ಬಿಡಿ ಬಿಡಿ ಯಾಗಿ ಬಿಡಿಸಿಟ್ಟ ಕಲಾವಿದ.
ಅವನು
ಮಾತಿನಲಿ ಮುಳುಗಿಸಿ ,
ಹಾಡುಗಳ ಹರಿಸಿ
ಕವಿತೆಗಳ ಕಟ್ಟಿ
ಚಿತ್ರಗಳ ಬಿಡಿಸಿ
ಬದುಕಿನ ದಡವ ಮುಟ್ಟಿಸಿದ
ಅಂಬಿಗ !!
ಮಾತಿನ ಮೋಡಿಯಲಿ
ಮನವ ಗೆದ್ದು
ಮರುಳು ಮಾಡಿದ ಮಾಂತ್ರಿಕ.
ಅವನು
ಎದೆಯ ವೀಣೆಯ ಮೀಟೀ
ಹಾಡುಗಳ ಹೊನಲಿನ ಮೇಲೆ
ಪಯಣಿಸಲು ಕರೆದ ಗಾಯಕ.
ಅವನು
ಅಕ್ಶರಗಳ ಪೋಣಿಸಿ ,
ಕವಿತೆಗಳ ಕಟ್ಟಿ,
ಬದುಕನ್ನು
ದೃಶ್ಯ ಕಾವ್ಯ ವಾಗಿಸಿದ ಕವಿ.
ಅವನು
ಬದುಕಿನ ಬಿಂಬಗಳನೆಲ್ಲ
ಬಿಡಿ ಬಿಡಿ ಯಾಗಿ ಬಿಡಿಸಿಟ್ಟ ಕಲಾವಿದ.
ಅವನು
ಮಾತಿನಲಿ ಮುಳುಗಿಸಿ ,
ಹಾಡುಗಳ ಹರಿಸಿ
ಕವಿತೆಗಳ ಕಟ್ಟಿ
ಚಿತ್ರಗಳ ಬಿಡಿಸಿ
ಬದುಕಿನ ದಡವ ಮುಟ್ಟಿಸಿದ
ಅಂಬಿಗ !!
ಮನಸು ಗೂಗಲ್ ಸರ್ಚ್ ಎಂಜಿನ್ ನಂತೆ !!
ಮನಸು
ಗೂಗಲ್ ಸರ್ಚ್ ಎಂಜಿನ್ ನಂತೆ !!
ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!
ಗೂಗಲ್ ಸರ್ಚ್ ಎಂಜಿನ್ ನಂತೆ !!
ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!
ನಿನ್ನ ನೆನಪು
ನಿನ್ನ ನೆನಪು
ಚಳಿಯ ಇರುಳಿನಲಿ
ಹೆಪ್ಪುಗಟ್ಟಿದ ಹಿಮ.
ನಿನ್ನ ನೆನಪು
ಮುಂಜಾವಿನ ಎಳೆಬಿಸಿಲಲಿ
ಮುಗಿಲಿನ ಎದೆ ಸೀಳಿ ಬರುವ
ಹೊನ್ನ ಕಿರಣ.
ನಿನ್ನ ನೆನಪು
ಮದ್ಯಾಹ್ನದ ಬಿರುಬಿಸಿಲಿನಲಿ
ಗುಲ್ ಮೊಹರಿನ ಸಂಬ್ರಮ.
ನಿನ್ನ ನೆನಪು
ಸಂಜೆಯ ತಂಪಿನಲಿ ಸುಮ್ಮನೆ
ಒಮ್ಮೆ ಬಂದು ,ಮನಸು ತಾಕುವ ತಂಗಾಳಿ.
ನಿನ್ನ ನೆನಪು
ದಿನವಿಡೀ ಕಾಡುವ,ಉಸಿರಿನಲಿ,ನೀರಿನಲಿ,
ಮನದಲಿ,ಎಲ್ಲೆಲ್ಲೂ ಕಾಡುವ
ಸುಂದರ ಗಜಲು.
ಚಳಿಯ ಇರುಳಿನಲಿ
ಹೆಪ್ಪುಗಟ್ಟಿದ ಹಿಮ.
ನಿನ್ನ ನೆನಪು
ಮುಂಜಾವಿನ ಎಳೆಬಿಸಿಲಲಿ
ಮುಗಿಲಿನ ಎದೆ ಸೀಳಿ ಬರುವ
ಹೊನ್ನ ಕಿರಣ.
ನಿನ್ನ ನೆನಪು
ಮದ್ಯಾಹ್ನದ ಬಿರುಬಿಸಿಲಿನಲಿ
ಗುಲ್ ಮೊಹರಿನ ಸಂಬ್ರಮ.
ನಿನ್ನ ನೆನಪು
ಸಂಜೆಯ ತಂಪಿನಲಿ ಸುಮ್ಮನೆ
ಒಮ್ಮೆ ಬಂದು ,ಮನಸು ತಾಕುವ ತಂಗಾಳಿ.
ನಿನ್ನ ನೆನಪು
ದಿನವಿಡೀ ಕಾಡುವ,ಉಸಿರಿನಲಿ,ನೀರಿನಲಿ,
ಮನದಲಿ,ಎಲ್ಲೆಲ್ಲೂ ಕಾಡುವ
ಸುಂದರ ಗಜಲು.
ನಿನ್ನ ಪ್ರೀತಿ
ನಿನ್ನ ಪ್ರೀತಿ,
ಕತ್ತಲ ಕಡಲ ಮೇಲೆ
ಬೆಳಗಿದ ಹಣತೆ.
ನಿನ್ನ ಪ್ರೀತಿ,
ಬದುಕಿನ ಬೇಗೆಯ ಮೇಲೆ
ಸುರಿದ ಮಳೆ.
ನಿನ್ನ ಪ್ರೀತಿ,
ಎದೆಯ ಮೌನದೊಳಗೆ
ಹೆಜ್ಜೆ ಹಾಕಿದ ಗಾನ.
ನಿನ್ನ ಪ್ರೀತಿ,
ಬಾಳ ಬರಡಿನ ಮೇಲೆ
ಹರಿದ ತೊರೆ.
ನಿನ್ನ ಪ್ರೀತಿ,
ಹಗಲು ಹಾಡುಗಳ ನಡುವೆ
ರಾತ್ರಿ ಮೌನ ರಾಗ.
ಕತ್ತಲ ಕಡಲ ಮೇಲೆ
ಬೆಳಗಿದ ಹಣತೆ.
ನಿನ್ನ ಪ್ರೀತಿ,
ಬದುಕಿನ ಬೇಗೆಯ ಮೇಲೆ
ಸುರಿದ ಮಳೆ.
ನಿನ್ನ ಪ್ರೀತಿ,
ಎದೆಯ ಮೌನದೊಳಗೆ
ಹೆಜ್ಜೆ ಹಾಕಿದ ಗಾನ.
ನಿನ್ನ ಪ್ರೀತಿ,
ಬಾಳ ಬರಡಿನ ಮೇಲೆ
ಹರಿದ ತೊರೆ.
ನಿನ್ನ ಪ್ರೀತಿ,
ಹಗಲು ಹಾಡುಗಳ ನಡುವೆ
ರಾತ್ರಿ ಮೌನ ರಾಗ.
ಮಂಗಳವಾರ, ಸೆಪ್ಟೆಂಬರ್ 18, 2007
ಬರಿದು ನೀಲಿ ಬಾನಿದೆ !!
ಕವಿತೆ ಬರೆಸಿಕೊಂಡ ಪುಟಕೆ
ಮಳೆ ತರಿಸಿಕೊಂಡ ಸುಖವಿದೆ.
ಕವಿಯ ಎದೆಯಲಿ ಮೋಡ ವಿಲ್ಲದ
ಬರಿದು ನೀಲಿ ಬಾನಿದೆ !!
ಮಳೆ ತರಿಸಿಕೊಂಡ ಸುಖವಿದೆ.
ಕವಿಯ ಎದೆಯಲಿ ಮೋಡ ವಿಲ್ಲದ
ಬರಿದು ನೀಲಿ ಬಾನಿದೆ !!
ಒಲಿದು ಬಂದವಳು ಕಾವ್ಯ !!
ನಾನು ಬಯಸಿದರೂ
ನನ್ನ ಬದುಕಿಗೆ
ದಕ್ಕದೆ ತಪ್ಪಿಸಿಕೊಂಡವಳು
ಸಂಗೀತಾ
ನನ್ನ ವರುಷ ಗಟ್ಟಲೆಕಾಡಿಸಿ,
ಕೊನೆಗೂ ಒಲಿದು ಬಂದವಳು
ಕಾವ್ಯ !!
I couldnt learn music,
but i could pen down poems !!
ನನ್ನ ಬದುಕಿಗೆ
ದಕ್ಕದೆ ತಪ್ಪಿಸಿಕೊಂಡವಳು
ಸಂಗೀತಾ
ನನ್ನ ವರುಷ ಗಟ್ಟಲೆಕಾಡಿಸಿ,
ಕೊನೆಗೂ ಒಲಿದು ಬಂದವಳು
ಕಾವ್ಯ !!
I couldnt learn music,
but i could pen down poems !!
ಅವರು
ಪ್ರೀತಿ ಎಂದರೆ
ಮನ ಮನಗಳ ನಡುವಿನ
ಪಿಸುಮಾತು ಎಂದವರು.
ನನ್ನ ನಗು ವಿಗಿಂತ
ನಿನ್ನ ಮನಸು
ಚಂದ ಎಂದವರು.
ನಿನ್ನ ಮಾತು ಕೇಳುತ್ತಲೇ
ಇರಬೇಕು ಎಂದು
ಮಾತು ಕೇಳದೆ ಹೊರಟು
ಹೋದವರು.
ಮುಂಜಾನೆ ಮುನಿದು
ಸಂಜೆ ಮರೆವ
ಮಗುವಿನಂತವರು.
ಹತ್ತಿರವಾದೆ ಎನ್ನುತ್ತಲೆ
ಮುನಿದು ದೂರ ಹೋದವರು,
ಎಲ್ಲೇ ಇರಲಿ ಅವರು
ಸುಖವಾಗಿರಲಿ ಅವರು,
ಮಗುವಿನಂತೆಯೇ ಇರಲಿ ಅವರು !!
ಮನ ಮನಗಳ ನಡುವಿನ
ಪಿಸುಮಾತು ಎಂದವರು.
ನನ್ನ ನಗು ವಿಗಿಂತ
ನಿನ್ನ ಮನಸು
ಚಂದ ಎಂದವರು.
ನಿನ್ನ ಮಾತು ಕೇಳುತ್ತಲೇ
ಇರಬೇಕು ಎಂದು
ಮಾತು ಕೇಳದೆ ಹೊರಟು
ಹೋದವರು.
ಮುಂಜಾನೆ ಮುನಿದು
ಸಂಜೆ ಮರೆವ
ಮಗುವಿನಂತವರು.
ಹತ್ತಿರವಾದೆ ಎನ್ನುತ್ತಲೆ
ಮುನಿದು ದೂರ ಹೋದವರು,
ಎಲ್ಲೇ ಇರಲಿ ಅವರು
ಸುಖವಾಗಿರಲಿ ಅವರು,
ಮಗುವಿನಂತೆಯೇ ಇರಲಿ ಅವರು !!
ಮನದ ಮೊಬೈಲು !
ನಮ್ಮಿಬ್ಬರ ಮನದ ಮೊಬೈಲುಗಳ ನಡುವೆ
ಸ್ವಿಚ್ದ್ ಆಫ್,ನಾಟ್ ರೀಚಬಲ್ ಗಳ ತೊಂದರೆ ಇಲ್ಲ !
ನಾನು ಅವಳ ನೆನೆದರೆ
ಅವಳ ಮನದಲಿ ರಿಂಗನ
ಅವಳು ನನ್ನ ನೆನೆದರೆ
ನನ್ನ ಮನದಲಿ ರಿಂಗನ !!
ಸ್ವಿಚ್ದ್ ಆಫ್,ನಾಟ್ ರೀಚಬಲ್ ಗಳ ತೊಂದರೆ ಇಲ್ಲ !
ನಾನು ಅವಳ ನೆನೆದರೆ
ಅವಳ ಮನದಲಿ ರಿಂಗನ
ಅವಳು ನನ್ನ ನೆನೆದರೆ
ನನ್ನ ಮನದಲಿ ರಿಂಗನ !!
ಸೋಮವಾರ, ಸೆಪ್ಟೆಂಬರ್ 17, 2007
ಬೆವರ ಮುತ್ತಿನ ಸಾಲು
ಮುತ್ತುಗಳಿಂದ ಅಲಂಕರಿಸಬೇಕೆನಿಸಿತು ನನಗೆ
ಅವಳ ಮೊಗದ ಚೆಲುವನು.
ನನ್ನ ತಬ್ಬಿ ನಾಚಿ ನೀರಾದಳು ಹುಡುಗಿ ,
ಅವಳ ಹಣೆಯ ಮೇಲೀಗ
ಬೆವರ ಮುತ್ತಿನ ಸಾಲು !
ಅವಳ ಮೊಗದ ಚೆಲುವನು.
ನನ್ನ ತಬ್ಬಿ ನಾಚಿ ನೀರಾದಳು ಹುಡುಗಿ ,
ಅವಳ ಹಣೆಯ ಮೇಲೀಗ
ಬೆವರ ಮುತ್ತಿನ ಸಾಲು !
ಅಕ್ಷರವೇ ಪ್ರೀತಿ ನನಗೆ
ಸಂಖ್ಯೆ ಗಿಂತ
ಅಕ್ಷರವೇ ಪ್ರೀತಿ ನನಗೆ.
ಸಂಖ್ಯೆ ,
ವಾಸ್ತವವ ಘೋಷಿಸಿ ದಿಗಿಲುಗೊಳಿಸಿದರೆ,
ಅಕ್ಷರ ಸನಿಹ ಕರೆದು ಪ್ರೀತಿ ತೋರಿದೆ !
I Prefer Arts to Commerce !!
ಅಕ್ಷರವೇ ಪ್ರೀತಿ ನನಗೆ.
ಸಂಖ್ಯೆ ,
ವಾಸ್ತವವ ಘೋಷಿಸಿ ದಿಗಿಲುಗೊಳಿಸಿದರೆ,
ಅಕ್ಷರ ಸನಿಹ ಕರೆದು ಪ್ರೀತಿ ತೋರಿದೆ !
I Prefer Arts to Commerce !!
ಬದುಕು
ಬದುಕು,
ಅರೆತೆರೆದ ಕಣ್ಣು,
ಹೊಯ್ದಾಡುವ ದೀಪ,
ಗಾಳಿಗೆ ಸಿಕ್ಕ ಪುಸ್ತಕದ ಪುಟ !
ಬದುಕು,
ಮರುಭೂಮಿ ಮೇಲೆ ಚಿಗುರಿನ ಮೆರುಗು,
ಕಡಲ ನಡುವಿನ ಹಡಗು,
ಕಂಡೂ ಕಾಣದ ಕತ್ತಲ ದಂಡೆ !
ಬದುಕು,
ಹಳತಾಗಿ ತೆಗೆದಿಟ್ಟ ಕನ್ನಡಕ,
ಬಿಗಿಯಾಗಿ ಬಿಚಿತ್ತ ಉಂಗುರ,
ಕಣ್ಣಿಗೆ ಕಾಣದೆ ಉಳಿದ ಬಂಗಾರದಂತ ಪುಸ್ತಕ !
ಬದುಕು,
ತುಟಿಯ ತುದಿಯ ಹಾಡು,
ಅರ್ಥವಾಗದ ಕವಿತೆ,
ವೃತ್ತವಾಗಲು ಹೋಗಿ ಅರ್ಧ ಚಂದ್ರ ವಾದ ರೀತಿ !!
ಅರೆತೆರೆದ ಕಣ್ಣು,
ಹೊಯ್ದಾಡುವ ದೀಪ,
ಗಾಳಿಗೆ ಸಿಕ್ಕ ಪುಸ್ತಕದ ಪುಟ !
ಬದುಕು,
ಮರುಭೂಮಿ ಮೇಲೆ ಚಿಗುರಿನ ಮೆರುಗು,
ಕಡಲ ನಡುವಿನ ಹಡಗು,
ಕಂಡೂ ಕಾಣದ ಕತ್ತಲ ದಂಡೆ !
ಬದುಕು,
ಹಳತಾಗಿ ತೆಗೆದಿಟ್ಟ ಕನ್ನಡಕ,
ಬಿಗಿಯಾಗಿ ಬಿಚಿತ್ತ ಉಂಗುರ,
ಕಣ್ಣಿಗೆ ಕಾಣದೆ ಉಳಿದ ಬಂಗಾರದಂತ ಪುಸ್ತಕ !
ಬದುಕು,
ತುಟಿಯ ತುದಿಯ ಹಾಡು,
ಅರ್ಥವಾಗದ ಕವಿತೆ,
ವೃತ್ತವಾಗಲು ಹೋಗಿ ಅರ್ಧ ಚಂದ್ರ ವಾದ ರೀತಿ !!
ಮಲಗುವ ಮುನ್ನ
ಮಲಗುವ ಮುನ್ನ ನನ್ನ
ಎಳೆದುಕೊ ನಿನ್ನ ಕಣ್ಣಿನೊಳಗೆ,
ಚಾದರಿನ ಹಂಗಿಲ್ಲದೆ ಮಲಗಿರುವೆ
ರಾತ್ರಿಯೆಲ್ಲ ಬೆಚ್ಚಗೆ ನಿನ್ನ ಕಣ್ಣಿನೊಳಗೆ !!
ಎಳೆದುಕೊ ನಿನ್ನ ಕಣ್ಣಿನೊಳಗೆ,
ಚಾದರಿನ ಹಂಗಿಲ್ಲದೆ ಮಲಗಿರುವೆ
ರಾತ್ರಿಯೆಲ್ಲ ಬೆಚ್ಚಗೆ ನಿನ್ನ ಕಣ್ಣಿನೊಳಗೆ !!
ಮೊಂಬತ್ತಿ
ಉರಿವ ದೀಪಕೆ
ಇಂಧನವ ಸುರಿದು
ಸೊರಗಿ ಕರಗಿತು ಮೊಂಬತ್ತಿ .
ಕವಿದ ಕತ್ತಲ ಕೆಡವಿ
ಬೆಳಕ ಬರುವಿಗೆ
ನೆರವಾದ ತೃಪ್ತಿ !!
ಇಂಧನವ ಸುರಿದು
ಸೊರಗಿ ಕರಗಿತು ಮೊಂಬತ್ತಿ .
ಕವಿದ ಕತ್ತಲ ಕೆಡವಿ
ಬೆಳಕ ಬರುವಿಗೆ
ನೆರವಾದ ತೃಪ್ತಿ !!
ಕನಸು ಮುತ್ತಾದಾಗ
ಇರುಳಿನಲಿ
ಕಣ್ಣರೆಪ್ಪೆಗಳೆರಡು
ಕನಸುಗಳ ಕಾವಲು ಕಾದವು.
ಬೆಳಕು ಹರಿವ ಹೊತ್ತಿಗೆ
ಕನಸುಗಳು ಮುತ್ತುಗಳಾಗಿ ಹೊಳೆದು
ಕಣ್ಣಿಂದ ಉರುಳಿದವು !!
ಕಣ್ಣರೆಪ್ಪೆಗಳೆರಡು
ಕನಸುಗಳ ಕಾವಲು ಕಾದವು.
ಬೆಳಕು ಹರಿವ ಹೊತ್ತಿಗೆ
ಕನಸುಗಳು ಮುತ್ತುಗಳಾಗಿ ಹೊಳೆದು
ಕಣ್ಣಿಂದ ಉರುಳಿದವು !!
ಪ್ರೇಮಿಯ ಮನದ ಹವಾಮಾನ ವರದಿ
ಕಣ್ಣಲ್ಲಿ ಮೋಡ ಕವಿದ ವಾತಾವರಣ ,
ಎದೆಯಲ್ಲಿ ಒಣ ಹವೆ,
ಸಂಜೆ ಹೊತ್ತಿಗೆ ಬಿರುಗಾಳಿ ,ಮಳೆ ಸಂಭವ ,
ಮನಸೆಂಬ ಮೀನುಗಾರನಿಗೆ
ಪ್ರೀತಿ ಸಾಗರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ !!
ಎದೆಯಲ್ಲಿ ಒಣ ಹವೆ,
ಸಂಜೆ ಹೊತ್ತಿಗೆ ಬಿರುಗಾಳಿ ,ಮಳೆ ಸಂಭವ ,
ಮನಸೆಂಬ ಮೀನುಗಾರನಿಗೆ
ಪ್ರೀತಿ ಸಾಗರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ !!
ಹಿಡಿ ಮಣ್ಣು ಹಿಡಿದು
ಹಿಡಿ ಮಣ್ಣು ಹಿಡಿದು ನೆನಪುಗಳ
ಮುಚ್ಚಿ ಹಾಕ ಹೊರಡುವೆ ನಾನು .
ಅರಿವಿಲ್ಲದಂತೆ ನೆನಪಿನ ಸಸಿಗೆ
ಮಡಿ ಕಟ್ಟುವೆ ನಾನು !!
ಮುಚ್ಚಿ ಹಾಕ ಹೊರಡುವೆ ನಾನು .
ಅರಿವಿಲ್ಲದಂತೆ ನೆನಪಿನ ಸಸಿಗೆ
ಮಡಿ ಕಟ್ಟುವೆ ನಾನು !!
ನಾನು ಕವಿಯಲ್ಲ,
ನನ್ನೆಲ್ಲ ಕವಿತೆಗಳು
ಅವಳ ಕಣ್ಣ ಕಡಲಲ್ಲಿವೆ.
ನಾನು ಕವಿಯಲ್ಲ,
ಮುತ್ತುಗಳ ಹೆಕ್ಕಿ ತರುವ
ಈಜುಗಾರ ಅಷ್ಟೇ !!
ಅವಳ ಕಣ್ಣ ಕಡಲಲ್ಲಿವೆ.
ನಾನು ಕವಿಯಲ್ಲ,
ಮುತ್ತುಗಳ ಹೆಕ್ಕಿ ತರುವ
ಈಜುಗಾರ ಅಷ್ಟೇ !!
ಬೆಳಕಿರದ ಸೂರ್ಯರಂತೆ !!
ಅವಳ ಕಾಣದ
ಕನ್ನಡಿಯ ಮೇಲೆ
ಮುಸುಕು ಬಿದ್ದಿದೆ.
ಕನ್ನಡಿಯ ಅಂಚಿಗೆಲ್ಲ
ಅವಳು ಬಿಟ್ಟು ಹೋದ ಬಿಂಧಿ ಸಾಲು
ಹಾಗೆ ಇದೆ.
ಬೆಳಕಿರದ ಸೂರ್ಯರಂತೆ !!
ಕನ್ನಡಿಯ ಮೇಲೆ
ಮುಸುಕು ಬಿದ್ದಿದೆ.
ಕನ್ನಡಿಯ ಅಂಚಿಗೆಲ್ಲ
ಅವಳು ಬಿಟ್ಟು ಹೋದ ಬಿಂಧಿ ಸಾಲು
ಹಾಗೆ ಇದೆ.
ಬೆಳಕಿರದ ಸೂರ್ಯರಂತೆ !!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)