ಕವನಗಳ ಗೊಂಚಲು

ಬುಧವಾರ, ಸೆಪ್ಟೆಂಬರ್ 19, 2007

ನಿನ್ನ ನೆನಪು

ನಿನ್ನ ನೆನಪು
ಚಳಿಯ ಇರುಳಿನಲಿ
ಹೆಪ್ಪುಗಟ್ಟಿದ ಹಿಮ.

ನಿನ್ನ ನೆನಪು
ಮುಂಜಾವಿನ ಎಳೆಬಿಸಿಲಲಿ
ಮುಗಿಲಿನ ಎದೆ ಸೀಳಿ ಬರುವ
ಹೊನ್ನ ಕಿರಣ.

ನಿನ್ನ ನೆನಪು
ಮದ್ಯಾಹ್ನದ ಬಿರುಬಿಸಿಲಿನಲಿ
ಗುಲ್ ಮೊಹರಿನ ಸಂಬ್ರಮ.

ನಿನ್ನ ನೆನಪು
ಸಂಜೆಯ ತಂಪಿನಲಿ ಸುಮ್ಮನೆ
ಒಮ್ಮೆ ಬಂದು ,ಮನಸು ತಾಕುವ ತಂಗಾಳಿ.

ನಿನ್ನ ನೆನಪು
ದಿನವಿಡೀ ಕಾಡುವ,ಉಸಿರಿನಲಿ,ನೀರಿನಲಿ,
ಮನದಲಿ,ಎಲ್ಲೆಲ್ಲೂ ಕಾಡುವ
ಸುಂದರ ಗಜಲು.

ಕಾಮೆಂಟ್‌ಗಳಿಲ್ಲ: