ಕವನಗಳ ಗೊಂಚಲು

ಬುಧವಾರ, ಸೆಪ್ಟೆಂಬರ್ 19, 2007

ಅವನು

ಅವನು
ಮಾತಿನ ಮೋಡಿಯಲಿ
ಮನವ ಗೆದ್ದು
ಮರುಳು ಮಾಡಿದ ಮಾಂತ್ರಿಕ.

ಅವನು
ಎದೆಯ ವೀಣೆಯ ಮೀಟೀ
ಹಾಡುಗಳ ಹೊನಲಿನ ಮೇಲೆ
ಪಯಣಿಸಲು ಕರೆದ ಗಾಯಕ.

ಅವನು
ಅಕ್ಶರಗಳ ಪೋಣಿಸಿ ,
ಕವಿತೆಗಳ ಕಟ್ಟಿ,
ಬದುಕನ್ನು
ದೃಶ್ಯ ಕಾವ್ಯ ವಾಗಿಸಿದ ಕವಿ.

ಅವನು
ಬದುಕಿನ ಬಿಂಬಗಳನೆಲ್ಲ
ಬಿಡಿ ಬಿಡಿ ಯಾಗಿ ಬಿಡಿಸಿಟ್ಟ ಕಲಾವಿದ.

ಅವನು
ಮಾತಿನಲಿ ಮುಳುಗಿಸಿ ,
ಹಾಡುಗಳ ಹರಿಸಿ
ಕವಿತೆಗಳ ಕಟ್ಟಿ
ಚಿತ್ರಗಳ ಬಿಡಿಸಿ
ಬದುಕಿನ ದಡವ ಮುಟ್ಟಿಸಿದ
ಅಂಬಿಗ !!

ಕಾಮೆಂಟ್‌ಗಳಿಲ್ಲ: