ಕವನಗಳ ಗೊಂಚಲು

ಗುರುವಾರ, ಸೆಪ್ಟೆಂಬರ್ 20, 2007

ಕನಸುಗಳ ಚೀಲ

ಕನಸುಗಳ ಚೀಲ ಹೊತ್ತು ಹೊರಟಿತ್ತು
ಮನಸು.

ಚೀಲವೇಕೋ ಹಗುರವಾಗಿ,
ಕನಸುಗಳು ಸೋರೀ ಹೋದವೆಂದು
ದಿಗಿಲು ಗೊಂಡಿತು ಮನಸು.

ತಿರುಗಿ ನೋಡಿದರೆ ನನಸುಗಳ
ರಂಗೋಲಿ ಬಿಡಿಸಿತ್ತು
ಬದುಕು.

2 ಕಾಮೆಂಟ್‌ಗಳು:

Seema S. Hegde ಹೇಳಿದರು...

ಇದಂತೂ ಎಷ್ಟು ಚೆನ್ನಾಗಿದೆ ಗೊತ್ತಾ?
ನನ್ನ note bookನಲ್ಲಿ ಬರೆದಿಟ್ಟುಕೊಂಡಿದ್ದೀನಿ.

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಹೇಳಿದರು...

ತುಂಬಾ ಥ್ಯಾಂಕ್ಸ್ ಸೀಮಾ ,

ನಿಮ್ಮ ಇಂಥ ಕಾಮೆಂಟ್ಸ್ ನನಗೆ ಯಾವ ಯೂನಿವರ್ಸಿಟೀ ಯು ಕೊಡಲಾಗದ ಸರ್ಟಿಫಿಕೇಟ್ ಇದ್ದ ಹಾಗೆ !!