ಕವನಗಳ ಗೊಂಚಲು

ಮಂಗಳವಾರ, ಸೆಪ್ಟೆಂಬರ್ 18, 2007

ಅವರು

ಪ್ರೀತಿ ಎಂದರೆ
ಮನ ಮನಗಳ ನಡುವಿನ
ಪಿಸುಮಾತು ಎಂದವರು.

ನನ್ನ ನಗು ವಿಗಿಂತ
ನಿನ್ನ ಮನಸು
ಚಂದ ಎಂದವರು.

ನಿನ್ನ ಮಾತು ಕೇಳುತ್ತಲೇ
ಇರಬೇಕು ಎಂದು
ಮಾತು ಕೇಳದೆ ಹೊರಟು
ಹೋದವರು.

ಮುಂಜಾನೆ ಮುನಿದು
ಸಂಜೆ ಮರೆವ
ಮಗುವಿನಂತವರು.

ಹತ್ತಿರವಾದೆ ಎನ್ನುತ್ತಲೆ
ಮುನಿದು ದೂರ ಹೋದವರು,

ಎಲ್ಲೇ ಇರಲಿ ಅವರು
ಸುಖವಾಗಿರಲಿ ಅವರು,
ಮಗುವಿನಂತೆಯೇ ಇರಲಿ ಅವರು !!