ಕವನಗಳ ಗೊಂಚಲು

ಗುರುವಾರ, ಸೆಪ್ಟೆಂಬರ್ 20, 2007

ಮೊದಲ ಒಲವಿನ ಚೆಲುವು

ಮೊದಲ ಒಲವಿನ ಚೆಲುವೇ
ಹಾಗೆ.

ನಿಲುಕದ ನಭದ ನಕ್ಷತ್ರದ
ನಗುವಿನಂತೆ.

ಹೊನ್ನಾಗಿ ಹೊಳೆವ ಹಳೆಯ
ಹಾಡಿನಂತೆ.

ಮನದ ಬಾಗಿಲು ದಾಟಿ ಒಳ ಸುಳಿವ
ನೆನಪಿನಂತೆ.

6 ಕಾಮೆಂಟ್‌ಗಳು:

Seema S. Hegde ಹೇಳಿದರು...

ತುಂಬಾ ದಿನಗಳಿಂದ ಬಂದು ಹೋಗ್ತಿದ್ದೀನಿ.
ಯಾಕೆ ಬರೀತಾನೆ ಇಲ್ಲಾ?

jomon varghese ಹೇಳಿದರು...

ಒಲವಿನ ಬಗ್ಗೆ ಬರೆದ ನಿಮ್ಮ ಚೆಲುವಿನ ಸಾಲುಗಳು ತುಂಬಾ ಇಷ್ಟವಾದವು.

ನೆನಪುಗಳ ಮಾತು ಮಧುರ ಅಲ್ಲವೇ.. ಕಿಟಕಿ ದಾಟಿ ಅದು ಒಳಮನೆಗೆ ಹರಿದು ಬರಲಿ...

ನೀವು ಹೀಗೆ ಬರೆಯುತ್ತಿರಿ, ನಾವು ಆಗಾಗ್ಗ ನಿಮ್ಮ ಬ್ಲಾಗ್ ಗೆ ಬಂದು ಹೋಗುತ್ತಿರುತ್ತೇವೆ...

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಹೇಳಿದರು...

seema avare , sorry, tumba busy aagidde, blog ge baroke aagilla.


joman avare nimma preeti ya maatige dhanyawaada galu.
nimma maLe hani blog adbhuta vaagide.

Seema S. Hegde ಹೇಳಿದರು...

Hegittu Jagjit avara concert?
Chennagiye irutte bidi.
Adannu bere heluva agatyave illa alva?
Bangalore nalle iddiddare naanoo baruttidde.

Sridhar Raju ಹೇಳಿದರು...

ನಮಸ್ಕಾರ ಶ್ರೀನಿವಾಸ್ ಅವರೇ ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,
-ಶ್ರೀಧರ

ಗೌತಮ್ ಹೆಗಡೆ ಹೇಳಿದರು...

nimma ella kavanagalu khushi kottive:) heege bareyuttiri:)