ಕವನಗಳ ಗೊಂಚಲು

ಬುಧವಾರ, ಸೆಪ್ಟೆಂಬರ್ 19, 2007

ನಿರಿಗೆಗಳಂತೆ

ನೀರೊಳಗಿನ ಕಲ್ಲ ಮೇಲೆ
ಕಂಡವು ಗೀರುಗಳು.

ಮಾಗಿದ ಮುಖದ ಮೇಲೆ
ಇರುವ ನಿರಿಗೆಗಳಂತೆ !!

2 ಕಾಮೆಂಟ್‌ಗಳು:

Seema S. Hegde ಹೇಳಿದರು...

ಕವಿತೆಗಳೆಲ್ಲವೂ ಚೆನ್ನಾಗಿವೆ.
ನಿಮ್ಮ ಸಣ್ಣ ಕವಿತೆಗಳು ನನಗೆ ಇನ್ನೂ ಹೆಚ್ಚು ಇಷ್ಟವಾದವು.
ದಿನಾಲೂ ನಿಮ್ಮಿಂದ ಇಷ್ಟೊಂದು ಕವಿತೆಗಳು ಹೊರ ಬರುತ್ತವಾ?
ಅಥವಾ ತುಂಬಾ ದಿನಗಳಿಂದ ಬರೆದಿಟ್ಟದ್ದನ್ನು ಈಗ post ಮಾಡುತ್ತಿದ್ದೀರಾ?
ಅಂದ ಹಾಗೆ ಮರೆತಿದ್ದೆ... ನಾನಗೂ ಕೂಡ Jagjit Singh ಅವರ Gazals ಅಂದ್ರೆ ತುಂಬಾ ತುಂಬಾ ಇಷ್ಟ.

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಹೇಳಿದರು...

ತುಂಬಾ ತುಂಬಾ ಧನ್ಯವಾದಗಳು.

ಕಳೆದ ಒಂದು ವರುಷದಲ್ಲಿ ನನ್ನಿಂದ ಬರೆಸಿಕೊಂಡ ಕಾವ್ಯ ಬಿಂದುಗಳು ಇವು !

ಮೊನ್ನೆ ಮೊನ್ನೆ ಬ್ಲಾಗ್ ಎಂಬ ಮನೆ ಕಟ್ಟಿರುವೆ
ಅದಕ್ಕೆ ಎಲ್ಲ ವನ್ನು ಈಗ ಪೋಸ್ಟ್ ಮಾಡುತ್ತಿರುವೆ !

ವೆಲ್ , ಜಗಜೀತ್ ಸಿಂಗ್ ಬಗ್ಗೆ ಎಲ್ಲಿಂದ ಶುರು ಮಾಡಲಿ
ಆತ ಕಳೆದ 6 ವರುಷ ಗಳಿಂದ ನನ್ನ ಮನಸನ್ನು ಆಳುತ್ತಿರುವ
ಗಂಧರ್ವ ಗಾಯಕ !!