ಅವನು
ಮಾತಿನ ಮೋಡಿಯಲಿ
ಮನವ ಗೆದ್ದು
ಮರುಳು ಮಾಡಿದ ಮಾಂತ್ರಿಕ.
ಅವನು
ಎದೆಯ ವೀಣೆಯ ಮೀಟೀ
ಹಾಡುಗಳ ಹೊನಲಿನ ಮೇಲೆ
ಪಯಣಿಸಲು ಕರೆದ ಗಾಯಕ.
ಅವನು
ಅಕ್ಶರಗಳ ಪೋಣಿಸಿ ,
ಕವಿತೆಗಳ ಕಟ್ಟಿ,
ಬದುಕನ್ನು
ದೃಶ್ಯ ಕಾವ್ಯ ವಾಗಿಸಿದ ಕವಿ.
ಅವನು
ಬದುಕಿನ ಬಿಂಬಗಳನೆಲ್ಲ
ಬಿಡಿ ಬಿಡಿ ಯಾಗಿ ಬಿಡಿಸಿಟ್ಟ ಕಲಾವಿದ.
ಅವನು
ಮಾತಿನಲಿ ಮುಳುಗಿಸಿ ,
ಹಾಡುಗಳ ಹರಿಸಿ
ಕವಿತೆಗಳ ಕಟ್ಟಿ
ಚಿತ್ರಗಳ ಬಿಡಿಸಿ
ಬದುಕಿನ ದಡವ ಮುಟ್ಟಿಸಿದ
ಅಂಬಿಗ !!
ನನಗೇಕೋ ಕಥಾಸಾಗರಿಗಿಂತ, ಕಾದಂಬರಿಗಿಂತ ,ಕಾವ್ಯ ಕನ್ನಿಕೆಯೇ ಇಷ್ಟ !!
ನನ್ನ ಬಗ್ಗೆ ಒಂಚೂರು ! ಮತ್ತು ನನ್ನ ಮನೋ ಡೇಟಾ !!

- ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್
- ಭಾವ ಜೀವಿ, ಕಾವ್ಯ ಜೀವಿ, ಪುಸ್ತಕ ಪ್ರೇಮಿ, ಘಜಲ್ ಪ್ರಿಯ, ಭಾವಗೀತೆ ಕೇಳುವ ಭಾವುಕ, ಕವಿ, ಗಾಯಕ, ಮಗು, ನೆನಪಿನ ಗಣಿ, ಬಹುಮುಖ ಪ್ರತಿಭೆ ಅಂತ ಗೆಳೆಯ ಗೆಳತಿಯರು ಅಂತಾರೆ , ನಾನು ಬಯಲು ಸೀಮೆಯ ಹುಡುಗ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ತುರ್ವಿಹಾಳ್ ಎಂಬ ನೀರಾವರಿ ಗ್ರಾಮ ದವನು. ಬಾಲ್ಯ ಅಲ್ಲಿ, ಬದುಕು ಬೆಂಗಳೂರಿನಲ್ಲಿ !!, ಅಂದ ಹಾಗೆ ಬರ್ತೀರಲ್ಲಾ ನಮ್ಮ ಮನೆಗೆ,ಖಂಡಿತ ಬರಬೇಕು ಛಲೋ ನಾಷ್ಟ, ಕಡಕ್ ಛಾ ಅಂಡ್ ಆಫ್ ಕೋರ್ಸ್ ಒಂದು ಒಳ್ಳೇ ಪುಸ್ತಕ , ಇಂಪಾಗಿರೋ ಒಂದು ಗಜಲ್ ಅಥವಾ ಭಾವಗೀತೆ ಸೀಡೀ ಇಷ್ಟು ಕೊಡಬಲ್ಲೆ !! ಬರ್ತೀರಲ್ಲಾ !! ಈ ಪುಟದೊಳಗ ನಾನು ಆವಾಗ ಆವಾಗ ಬರಕೊಂಡಿರೋ ಕವನಗಳನ್ನ ನಿಮ್ಮ ಮುಂದ ಹರ್ವೀನಿ ಓದ್ರಿ, ಏನು ಅನಿಸ್ತು ಅಂತ ಒಂದು ಪತ್ರ ಗೀಚರಿ, ಅದಕಿಂತ ಮಿಗಿಲಾಗಿ ಬರೆವ ಹಕ್ಕಿಗೆ ಬೇಕೇ ಬಿರುದು ಸನ್ಮಾನ !!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ